Wednesday, January 16, 2013

ಡಾಲರ್ ಗೆ ದಾಸರಾಗಿ ಬೆವರು ಸುರಿಸುವ ಯುವ ಜನರೇ, ಮರೆತಿರಾ ದೇಶಕ್ಕೆ ಸಹೋದರ ಹರಿಸಿದ ರಕ್ತ


ಶತ್ರುಗಳ ಗುಂಡು ಗಡಿಯನ್ನು ದಾಟಿ ಬರುವ ಮುಂಚೆಯೇ ಎದೆ ಕೊಟ್ಟು ತಡೆದು ನಮ್ಮನ್ನು ಕಾಯುತ್ತಿರುವ ಮಾನವ ನಿರ್ಮಿತ ಗೋಡೆ ನಮ್ಮ ಯೋಧ. ಇಷ್ಟು ಸಾಕು ಯೋಧನ ಧೈರ್ಯ , ತ್ಯಾಗ ವರ್ಣಿಸಲು.

MNC ಒಳಗೆ ಟೈಟ್ ಸೆಕ್ಯುರಿಟಿ, ಎ ಸಿ ರೂಂ , ಕೈ ತುಂಬಾ ಸಂಬಳ , ಮನದನ್ನೆ, ಕಾರ್, ವೀಕೆಂಡ್ ಮಸ್ತಿ , ಯಾರಿಗುಂಟು ಯಾರಿಗಿಲ್ಲ ಇಂತ ಜೀವನ. ಏನಂತೀರಿ?  ಸ್ವರ್ಗಕ್ಕೆ ಕಿಚ್ಚು ಹಚ್ಹೊದು ಅಂದ್ರೆ ಇದೇನಾ?

ಬಿಡಿ ಇದೆಲ್ಲ ನಮ್ software ಯುವ ಜನಾಂಗಕ್ಕೆ ಎಲ್ಲಿ ಅರ್ಥ ಆಗುತ್ತೆ . virus ಬಂದಾಗ ತನ್ನಿಂತಾನೆ ಹುಡುಕಿ  ಸಾಯ್ಸೋ ತರ ಅಂತ ಅಂದುಕೊಂಡಿರ್ತಾರೆನೋ ಗಡಿ ಕಾಯೋ ಕೆಲಸ 

ದೇಶಕ್ಕಾಗಿ ಯಾರ್ ಬೇಕಾದ್ರೂ ಸಾಯಲಿ , ಏನು ಬೇಕಾದ್ರೂ ಮಾಡ್ಲಿ, ನಂಗೇನು ಚಿಂತೆ ? ನಮ್ಮ ಕೈಗೆ ಬರ್ತಾ ಇದೆಯಲ್ಲ ನೋಟುಗಳ ಕಂತೆ !!!!!
ಎಷ್ಟು   ದಿನ ಈ ಸುಖ, ನೆಮ್ಮದಿ.  ಶತ್ರುಗಳು ಗಡಿಯಿಂದ ಒಳಗೆ ನುಸುಳುವವರೆಗೆ ಮಾತ್ರ.ಒಮ್ಮೆ ನುಸುಳಿದರೆ ಏನು ಆಗುತ್ತೆ ಅನ್ನೋದನ್ನ ಹೇಳಬೇಕಾಗಿಲ್ಲ.  9/11ದುರಂತ ಚಿತ್ರಣ  ಕಣ್ಣ ಮುಂದೆ ಹಾದು  ಹೋಗುತ್ತೆ. 

ರಂಗ್ ದೇ ಬಸಂತಿ ಚಿತ್ರದ ಅಮೀರ್ ಖಾನ್ , ಏಕ್ ಥ ಟೈಗರ್ ಚಿತ್ರದ ಸಲ್ಮಾನ್ ಖಾನ್ ರ  ಅಭಿನಯದ ಚಾತುರ್ಯವನ್ನು ಮೆಚ್ಚಿದ ಜನ , ಸ್ನೇಹಿತರನ್ನ ಕಾಡಿ ಬೇಡಿ, ನೆಟ್ಟಲ್ಲಿ ಡೌನ್ ಲೋಡ್ ಮಾಡಿ , ರಿಂಗ್ ಟೋನ್  ಹಾಕಿ ಕೇಳಿದ್ದೇ ಕೇಳಿದ್ದು. ಸಿನೆಮ ನೋಡುವಾಗ ಎಂತಹ ದೇಶಪ್ರೇಮ, ಕೈ ನೋವಾಗುವವರೆಗೆ ಚಪ್ಪಾಳೆ ಹೊಡೆದದ್ದೆ ಹೊಡೆದದ್ದು. ಸಿನೆಮ ಮಾಡಿದ ನಿರ್ದೇಶಕರನ್ನು, ನಟರನ್ನು  ಹೊಗಳಿ  ಅಟ್ಟಕ್ಕೇರಿಸಿ, ತಮ್ಮ ಎರಡು ದಿನದ ದೇಶಪ್ರೇಮವನ್ನು ಎಲ್ಲೆಡೆ ಸಾರುತ್ತಾರೆ.ನಿಜ ಜೀವನದ ನಮ್ಮ ಹೀರೋ ಗಳನ್ನು ಜನ ಮರಿತಾರೆ. ಕಡೆ ಪಕ್ಷ ಸಿನೇಮಾ ಮಾಡಿ ಹಣ, ಕೀರ್ತಿ, ಜನಮಣ್ಣನೆ ಗಳಿಸಿದ ನಟ ಒಂದೇ ಒಂದು ಪ್ರತಿಭಟನೆ ಮಾಡಬಾರದಿತ್ತೆ ?

ಇತ್ತೀಚೆಗೆ ನಡೆದ ದೆಹಲಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ  ಬಹುತೇಕ ಜನ ಬೀದಿಗಿಳಿದು ಹೋರಾಟ ನಡೆಸಿದರು. ಅಲ್ಲಿ ಒಂದು ಮಹಿಳೆಯ ಮಾನಕ್ಕೆ ಪ್ರಾಣಕ್ಕೆ ಬೆಲೆ ಇತ್ತು. ಇಲ್ಲಿ ಭಾರತಮಾತೆಯ ಮಾನಕ್ಕೆ, ಪ್ರಾಣಕ್ಕೆ ಬೆಲೆ ಇಲ್ಲವೇ ? ನಮಗೂ ಇದಕ್ಕೂ ಏನೂ ಸಂಬಂಧ ಇಲ್ಲ ಅನ್ನೋ ನಿರ್ಲಿಪ್ತ ಭಾವನೆ . ಇದು ಎಷ್ಟು ಸಮಂಜಸ.

ನಮ್ಮ ದೇಶದ ಮಂತ್ರಿಗಳಿಗೆ ಪೋಲಿಸ್ ಪಡೆ ಸರ್ಪಗಾವಲು. ಅದೆಂಥ ಪ್ರೀತಿ ಭಯ ಅವರಿಗೆ ತಮ್ಮ ಜೀವದ ಮೇಲೆ !!! ಪ್ರಾಣದ ಹಂಗು ತೊರೆದು ದೇಶದ ಗಡಿಯನ್ನು ಸರ್ಪಗಾವಲು ಕಾಯುತ್ತಿರುವ ಸೈನಿಕನ ಪ್ರಾಣಕ್ಕೆ ಕೊಡುವ ಬೆಲೆ ಇದೆ ಏನು ? ವೋಟ್ ಬ್ಯಾಂಕಿಗಾಗಿ ಅನಗತ್ಯ, ಅನವಶ್ಯಕ ವಿಚಾರಗಳಿಗೆ ಹಗಲು ರಾತ್ರಿ ಪ್ರತಿಭಟನೆ ಮಾಡುವ ನಿಮ್ಮಹೋರಾಟಕ್ಕೆ, ವೀರ ಯೋಧನ  ರುಂಡ ಫುಟ್ಬಾಲಿನಂತೆ ಚೆಂಡಾಡಿದ ಶತ್ರುಗಳ ವಿರುದ್ದ ನಿಮ್ಮ ರಕ್ತ ಕುದಿಯಲ್ಲಿಲ್ಲವೇ ?

ಯೋಧ ಎಂದರೆ ಒಬ್ಬ ವ್ಯಕ್ತಿ ಅಲ್ಲ. ಸಂಬಳಕ್ಕೆ ಬಂದು ಕೆಲಸ  ಮಾಡಿ ಹೋಗುವ ಕಾರ್ಮಿಕನು ಅಲ್ಲ. ಅವನ ಹಿಂದೆ ಒಂದು ಸಂಸಾರದ ತ್ಯಾಗ ಇದೆ. ಅವನಿಗೂ ನಮ್ಮ ಹಾಗೆ ಅಮ್ಮ, ಅಪ್ಪ ಹೆಂಡತಿ ಮಕ್ಕಳು , ಬಂಧು, ಬಳಗ ಎಲ್ಲರು ಇದ್ದಾರೆ. 
ಈ ಸಂಧರ್ಭದಲ್ಲಿ ಸುಬಾಶ್ ಚಂದ್ರ ಬೋಸರ ಜೀವನದಲ್ಲಿ ನಡೆದ ಒಂದು ಘಟನೆ ನೆನಪಿಗೆ ಬರುತ್ತೆ 

ಒಬ್ಬ ತಾಯಿ ಬೋಸರಲ್ಲಿ ಬಂದು ಕೇಳಿಕೊಳ್ಳುತ್ತಾಳಂತೆ " ಇವನು ನನ್ನ ಮಗ, ದಯವಿಟ್ಟು ಇವನನ್ನು ನಿಮ್ಮ ಸೈನ್ಯದಲ್ಲಿ ಸೇರಿಸಿಕೊಳ್ಳಿ" ಅವನ್ನು ಅಡಿಯಿಂದ ಮುಡಿಯವರೆಗೆ ನೋಡಿದ ಬೋಸರು "ಏನು ತಾಯಿ, ಹುಟ್ಟು ಕುರುಡ ಇವನು, ಇವನಿಂದ ಯುದ್ದ ಮಾಡಲು ಸಾಧ್ಯವೇ ? " ಆಗ ಆ ತಾಯಿ ಹೇಳಿದಳಂತೆ " ನಿಜ ಸ್ವಾಮೀ ಅವನು ಕುರುಡನೆ, ಯುದ್ದ ಮಾಡಲಾರ.  ಆದರೆ ಶತ್ರುಗಳ ಒಂದು ಗುಂಡನ್ನು ನಾಶ  ಮಾಡಬಲ್ಲ". ನಿರುತ್ತರರಾದರು ಬೋಸರು.

ಸಂಬಳ ಸಾಲುವುದಿಲ್ಲ ಸೌಲಭ್ಯ ಸರಿಯಿಲ್ಲ ಎಂದು ಕಂಪೆನಿಯಿಂದ ಕಂಪೆನಿಗೆ ಹಾರುವ ನಮಗೆ, ದೇಶಪ್ರೇಮ ಯಾಕಿರುತ್ತೆ ಹೇಳಿ? ನಮ್ಮ ಹಾಗೆಯೇ ಅವರು ಯೋಚನೆ ಮಾಡಿದರೆ ದೇಶದ ಗತಿ ಏನು? ಅವರು ಮನುಷ್ಯರಲ್ಲವೇ ? ಆಸೆ ಆಕಾಂಕ್ಷೆಗಳು ಅವರಿಗೂ ಇಲ್ಲವೇ ? ನಮ್ಮಂಥ ನಾಮರ್ದ್ ಗಳನ್ನು ಕಾಯಲು ತಮ್ಮ ಪ್ರಾಣವನ್ನು ಒತ್ತೆ ಇಡುವ ಬದಲು ಹಾಯಾಗಿ ನಮ್ಮ ಹಾಗೆ ಬದುಕಲಿ ತಪ್ಪೇನು?

ಡಾಲರ್ ಆಸೆಗೆ ಹಗಲು ರಾತ್ರಿ ತಲೆಕೆಡಿಸಿಕೊಂಡು ಕುಳಿತ ಯುವ ಜನರೇ ದೇಶಕ್ಕಾಗಿ ತಲೆ ಕೊಟ್ಟ ಅಣ್ಣ, ತಮ್ಮಂದಿರ ತ್ಯಾಗಕ್ಕೆ ಕೆಲ ನಿಮಿಷದ ಸಂತಾಪ ಸೂಚಿಸಿದರೆ ನಾವು ಕಳೆದುಕೊಳ್ಳುವುದಾದರು  ಏನು?

"ಏ ಮೇರೆ ವತನ್ ಕೆ ಲೋಗೊ ಝರ ಆಂಖ್ ಮೇ ಭರ್ ಲೋ ಪಾನಿ ಜೋ ಶಹಿದ್ ಹುಯೆ ಹೇ ಉನ್ ಕಿ ಝರ ಯಾದ್  ಕರೋ ಖುರ್ಬಾನಿ" 

------------------------------------ಜೈ ಹಿಂದ್ --------------------------------------------------------------

Thursday, April 12, 2012

ಭೀಮ ತೀರದಲ್ಲಿ ಮುಳುಗಿದ .............

ಹಾವಿಗೆ ಹಲ್ಲಲಿ ಮಾತ್ರ ವಿಷ ಅಂತೆ, ಆದರೆ ಕೆಲವರಿಗೆ ಮೈಯಲ್ಲ ವಿಷ , ಅದು ನಿಜ ಅನಿಸಿದ್ದು ಭೀಮ ತೀರದಲ್ಲಿ ಸಿನಿಮಾದ ಸುತ್ತ ನಡೆದ ವಿವಾದದಿಂದ, ಬರೀ ತನ್ನ ಪತ್ರಿಕೆಯಲ್ಲಿ ಬರಿಯೋದೆ ಸತ್ಯ, ನಾನು ಬಳಸೋ ಶಬ್ದಗಳು , ವಾಕ್ಯಗಳು, ಪಂಪ, ರನ್ನರಿಗೆ ಏನು ಕಮ್ಮಿ ಇಲ್ಲ, ನಾನು ಒಂದು ಸಲ ಲೇಖನ ಬರೆದರೆ ಅದೇ ಕೋರ್ಟ್ ತೀರ್ಮಾನ ಅನ್ನೋ ರೀತಿ, ಗೀಚಿ ಗೀಚಿ ಎಷ್ಟೋ ಹೆಣ್ಣು ಮಕ್ಕಳ , ಸಂಸಾರಗಳ ಮಾನ ಮರ್ಯಾದೆ ಜೊತೆ ಚೆಲ್ಲಾಟ ಆಡಿ , ಅದನ್ನೇ ತನ್ನ ಬಂಡವಾಳ ಮಾಡಿ ,ಕೋಟಿ ಕೋಟಿ ಆಸ್ತಿ , ಕಿರ್ತೀ ಸಂಪಾದಿಸಿದ ಇವರನ್ನ ನೋಡಿದಾಗ, ಸತ್ಯ ಬಯಲಾದಾಗ.

ವಿವಾದ ಶುರು ಆಗಿದ್ದು ನಿರ್ಮಾಪಕರಿಗೆ ಬಂದ ಬೆದರಿಕೆ ಕಾಲ್ ನಿಂದ, ಅವಾಗ ಫೀಲ್ಡ್ ಗೆ ಎಂಟ್ರಿ ಕೊಟ್ಟ ಇವರ ಮಾತೂ indirect ಆಗಿ ಬೆದರಿಸುವ ತಂತ್ರ ಅನ್ನೋ ಹಾಗೇ ಇತ್ತು , ನಿರ್ಮಾಪಕರಿಗೆ, ನೀವು ೪೦ ಲಕ್ಷ ಕೊಡಿ, ಚಂದಪ್ಪ ಫ್ಯಾಮಿಲಿಗೆ hurt ಆಗಿದೆ , ಅವರ ಫ್ಯಾಮಿಲಿ ಮಕ್ಕಳ ದತ್ತು ತಗೊತೀನಿ ಅಂತ ಜನರ ಮುಂದೆ ಪ್ರಮಾಣ ಮಾಡಿ ಅಂತ ಲೈವ್ ಪ್ರೋಗ್ರಮಲ್ಲಿ ಹೀಗೆ ಒಬ್ಬರ ಮೇಲೆ ಒತ್ತಡ ತರೋ ಮೂಲಕ ತನ್ನ ಮನದಾಳದ ವಿಷ ವನ್ನು ಕಕ್ಕಿದು ಇದೆ ಮಹಾಸ್ವಾಮಿ, ಯಾವಾಗ ವಿವಾದ ಜಾಸ್ತಿ ಆಯಿತು ನೋಡಿ ಕೂಡಲೇ ತನ್ನ ವರಸೆ ಬದಲಿಸಿ ತನ್ನ ಕಥೆ ಇದು , ಭೀಮ ತೀರದ ಹಂತಕರನ್ನ ಪ್ರಪಂಚಕ್ಕೆ ಪರಿಚಯ ಮಾಡಿಕೊಟ್ಟವ ನಾನು ,ಅದರಲ್ಲಿ PHD ಮಾಡಿದೀನಿ ಅಂದ್ರು ,ಅವರೂ ಏನ್ ಮಹಾನ್ ಕೆಲಸ ಮಾಡಿದರು ಸ್ವಾಮಿ ಅದರಿಂದ ದೇಶಕ್ಕೇನು ಲಾಭ? ಸಮಾಜಕ್ಕೆ ಏನು ಲಾಭ? , ಅವರನ್ನ ಪ್ರಪಂಚಕ್ಕೆ ಪರಿಚಯ ಮಾಡಿ ಕೊಟಿದಕ್ಕೆ ಇವರಿಗೆ ನೋಬೆಲ್ ಪ್ರಶಸ್ತಿ ಕೊಡೋಣ ಬಿಡಿ.

ಕಥೆ ಕಾಲ್ಪನಿಕ ಆಗಿದ್ದರೆ , ತನ್ನ ಸ್ವಂತ ಬುದ್ಧಿಯಿಂದ ಕಥೆಯನ್ನ ಬರೆದು ಪಾತ್ರಗಳ ಸೃಷ್ಟಿ ಮಾಡಿದ್ದರೆ , ಅಂತ ಕಥೆಯನ್ನ ಸಿನಿಮಾ ಮಾಡಿದ್ದರೆ ಅದನ್ನು ಕೇಳೋದು ನ್ಯಾಯಾ . ಇದು newton ಗ್ರಾವಿಟಿ ಕಂಡು ಹಿಡಿದ ಮೇಲೆ ಎಲ್ಲರೂ ನನ್ನ ಪೆರ್ಮಿಶನ್ ತಗೊಂಡು ಮರಕ್ಕೆ ಕಲ್ಲು ಹೊಡೆದು ಮಾವಿನ ಕಾಯಿ ತಿನ್ನಿ ಅಂದ ಹಾಗಾಯಿತು, ಅವರು ಹಾಗೆ ಹೇಳಿದ್ದರೆ ಜನ ಕೇಳ್ತಾ ಇದ್ರೂ ಏನೋ, ಆದರೆ ಅವರು ಹಾಗೆ ಹೇಳಲಿಲ್ಲ ತುಂಬಿದ ಕೊಳ ಯಾವತ್ತು ತುಳುಕೊಲ್ಲ ನೋಡಿ ಅದಕ್ಕೆ , ಇವರ ವಾದ ಮಾತ್ರ ಮೂರ್ಖತನದ ಪರಮಾವದಿ.

ಇನ್ನೋಬರ ಬಗ್ಗೆ ಏನಾದರೂ ಹೇಳಬೇಕಾದರೆ , ತನ್ನ ಬಗ್ಗೆ ತಾನು ನೋಡ್ಬೇಕು, ಎಸ್ಟೋ ಹೆಣ್ಣು ಮಕ್ಕಳ ಬಗ್ಗೆ , ಸಿನಿಮಾ ನಟ ನಟಿಯರ ಬಗ್ಗೆ ,ಅವರ ಬಗ್ಗೆ ಮಸಾಲ ಮಿಕ್ಸ್ ಮಾಡಿ ಬರೆದೂ , ಶಬಾಸ್ ಅನ್ಸಿಕೊಂಡವರೂ, ಟಿವಿ interview ಒಂದರಲ್ಲಿ ತನಗೆ ಎರಡು ಹೆಂಡತೀ ಅಂತ ಹೆಮ್ಮೆಯಿಂದ ಹೇಳ್ತಾರೆ ಅಂದ್ರೇ, ಇವರಂಥ ಬಂಡ ಯಾರೂ ಇಲ್ಲ ಅಂದ್ರೇ ತಪ್ಪಲ. ಓ ಮನಸೇ ಅನ್ನೋ ತನ್ನದೇ ಪತ್ರಿಕೆಯಲ್ಲಿ ಹೆಣ್ಮಕ್ಕಳಿಗೆ respect ಕೊಡೋದೇನೂ, ಅಣ್ಣ ಅನಿಸಿಕೊಳೋದೇನೂ ಯಾಕೆ ಈ ಮೊಸಳೆ ಕಣ್ಣೀರು ಗುರುಗಳೇ.

ಬರೀ ಪತ್ರಿಕೆ ಸೇಲ್ ಮಾಡಿ ಸುಮರೂ ೨೫೦ ಕೋಟಿ ಆಸ್ತಿ ಮಾಡಿದರೆ ಅಂದ್ರೇ, ಪತ್ರಿಕೋದ್ಯಮ ಯಾವ ಸಾಫ್ಟ್ವೇರ್ ಉದ್ಯಮಕ್ಕೂ ಕಡಿಮೆ ಇಲ್ಲ ಬಿಡಿ, ಇವರನ್ನ ಐಐಎಂ ಅಲ್ಲಿ ಬುಸ್ಸಿನೆಸ್ಸ್ ಲೆಕ್ಚರಿಂಗ್ ಕಳಿಸಿದರೆ ಎಲ್ಲ ಉದ್ಯಮ ಕ್ಲಿಕ್ ಆಗಬಹುದು.
ಕಾಲವೇ ಎಲ್ಲದಕ್ಕೆ ಉತ್ತರ ಕೊಡುತ್ತೆ ಅನ್ನೋದು ನಿಜ . ಎಷ್ಟೂ ದಿನಗಳ ಆ ಸತ್ಯ ಇವತ್ತು ಬಯಲಾಗಿದೆ, ಅದೂ ತಾನಾಗಿ ತೋಡಿಕೊಂಡ ಹೊಂಡಕ್ಕೆ ತಾನೆ ಬಿದ್ದಾಗ, ತಾನೆ ಕಟ್ಟಿಕೊಂಡ ಸಾಮ್ರಾಜ್ಯ ಭೀಮ ತೀರದಲ್ಲಿ ಮುಳುಗಿದಾಗ.

ಇನ್ನಾದರೂ ಇಂತ ಬುಸ್ಸಿನೆಸ್ ಪತ್ರಿಕೆಗಳಿಗೆ , ಬ್ಲಾಕ್ ಮೇಲ್ ಮಾಡಿ ಬೇರೆಯವರ ಜೀವನ ನಾಶ ಮಾಡೋರಿಗೆ , ಜನ ಚಪ್ಪಲಿ ಸೇವೆ ಮೂಲಕ ಉತ್ತರ ಕೊಡಲಿ.

ಕೊಡ್ತಾರ? ಕಾಲವೇ ಉತ್ತರ ಹೇಳ್ಬೇಕು .......

Monday, March 26, 2012

ವ್ಯಕ್ತಿತ್ವದ ಫಿರಂಗಿಯ ಮುಂದೆ ಪುಡಿಯಾದ ಭದ್ರ ಕೋಟೆ

ಉಡುಪಿ - ಚಿಕ್ಕಮಗಳೂರು ಬಿಜೆಪಿಯ ಭದ್ರ ಕೋಟೆ ಎಂದರೆ ತಪ್ಪಿಲ್ಲ, ಬೇರೆ ಯಾರೇ ಕಾಂಗ್ರೆಸ್ನಿಂದ ನಿಂತಿದ್ದರೆ ಗೆಲುವು ಕಷ್ಟಾನೇ. ಸೋಲಿನ ಬಗ್ಗೆ ಹೇಳೋ ಮೊದಲು ಕ್ಷೇತ್ರದ ಇತಿಹಾಸ ನೋಡೋಣ. ಕಾಂಗ್ರೆಸ್ ನ ಭದ್ರ ಕೋಟೆ ಎಂದೆ ಖ್ಯಾತಿ, ಇಂದಿರ ಗಾಂಧಿಗೆ ರಾಜಕೀಯ ಪುನಶ್ಚೇತನ ಕೊಟ್ಟ ಮಲೆನಾಡು ಮತ್ತು ಕರಾವಳಿಯ ಬೆಟ್ಟ ಗುಡ್ಡಗಳ ಸ್ವರ್ಗ.
ನಾನು ಚಿಕ್ಕವನಿದ್ದಾಗ ನೆನಪು. ಕಾಂಗ್ರೆಸ್ ಅಂದ್ರೆ ಕಣ್ಮುಚ್ಚಿ ವೋಟ್ ಹಾಕುತ್ತಿದ್ದ ಎರಡು ಕ್ಷೇತ್ರಗಳು ಕಾರ್ಕಳ ಮತ್ತು ಕುಂದಾಪುರ. ನಾನು ಎಂಟು ಕ್ಷೇತ್ರಗಳಿದ್ರು ಎರಡು ಕ್ಷೇತ್ರದ ಬಗ್ಗೆ ಯಾಕೆ ಬರಿತಿದಿನಿ ಅಂದ್ರೆ ನಮ್ಮ ಇಬ್ಬರು ನಾಯಕರ ರಾಜಕೀಯ ಜನ್ಮಭೂಮಿ ಅದು.

೨೦೦೪ ರ ಮೊದಲು ಬರೇ ಕಾಂಗ್ರೆಸ್ ಎಮ್ಮೆಲ್ಲೆಗಳನ್ನು ಎರಡು ದಶಕಗಳಿಂದ ನೋಡಿದ ಜನಕ್ಕೆ ಒಬ್ಬ ಒಳ್ಳೆ ಯುವ ನಾಯಕನ ಕೊರತೆ ಇತ್ತು. ಬಜರಂಗ ದಳದ ಸಕ್ರಿಯ ಕಾರ್ಯಕ್ರಮ, ಸುಚೇತ ಶೆಟ್ಟಿಯ ಕೊಲೆ ಪ್ರಕರಣದ ವಿರುದ್ದ ಹೋರಾಟಗಳ ಮೂಲಕ ಸುನಿಲ್ ಕುಮಾರ್ ಎಂಬ ಸಾಮಾನ್ಯಾ ಮನುಷ್ಯನನ್ನು (ರಾಜಕೀಯ ಹಿನ್ನೆಲೆ ಇಲ್ಲದ ) ನಾಯಕ ಪಟ್ಟಕ್ಕೆ ತಂದು ನಿಲ್ಲಿಸಿತು . ರಾಜಕೀಯವಾಗಿ ಕಾಂಗ್ರೆಸ್ ಗೆ ವಿರುದ್ದ ಕಾರ್ಕಳದಲ್ಲಿ ನಾಯಕರೇ ಇಲ್ಲ ಅನ್ನೋ ಸ್ಥಿತಿ, ಇದನ್ನು ಹುಸಿ ಮಾಡಿದೂ ಸುನಿಲ್ ಕುಮಾರವರ ಹೋರಾಟ ಅದಕ್ಕೆ ಸಾಕ್ಷಿ ೨೦೦೪ ರ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ನ ಭದ್ರ ಕೋಟೆಯನ್ನ ಸುಮಾರು ೧೦ ಸಾವಿರ ಮತಗಳ ಅಂತರದಲ್ಲಿ ಸುನಿಲ್ ಕುಮಾರ್ ಗೆದ್ದಿದ್ರು.

ಜನ ನಾಯಕನಾಗಿ ಹೊರಬಂದ ವ್ಯಕ್ತಿ ಅಧಿಕಾರ ಸಿಕ್ಕಾಗ "ಚೇಂಜ್ ಆಗಿದ್ದಾನೆ, ಮೊದಲಿನ ತರ ಇಲ್ಲ " ಅನ್ನೋ ಮಾತು ಕೇಳಿ ಬಂತು. ಯಾವುದು ಸತ್ಯ, ಯಾವುದು ಸುಳ್ಳು ಅನ್ನೋದು ಗೊತ್ತಿಲ್ಲ ಒಟ್ಟಿನಲ್ಲಿ ೨೦೦೮ ರ
ಸುನಿಲ್ ಸೋಲಿಗೆ ಅದೇ ಕಾರಣ ಆಗಿತ್ತು .

ಬ್ರಹ್ಮಾವರ ಕ್ಷೇತ್ರದ ಸೋಲಿಲ್ಲದ ಸರದಾರ ಎಂದೇ ಖ್ಯಾತಿಯಾಗಿದ್ದ ಜೆ ಪಿ ಹೆಗಡೆಯವರು, ಜನ ಸಾಮಾನ್ಯರಿಗೆ ಸುಲಭವಾಗಿ ತಲುಪುವಂತಹ ವ್ಯಕ್ತಿತ್ವವನ್ನು ಪಡೆದುಕೊಂಡಿದ್ರು ಎಂಬುದರಲ್ಲಿ ಎರಡು ಮಾತಿಲ್ಲ. ಕ್ಷೇತ್ರ ವಿಂಗಡಣೆಯಿಂದ ಅವರ
ವಿಧಾನ ಸಭಾ ಕ್ಷೇತ್ರ ಉಡುಪಿ ಮತ್ತೆ ಕುಂದಾಪುರ ಪಾಲಾಯ್ತು .ಯಾವ ಪಕ್ಷ ಸೇರಬೇಕು ಎನ್ನೋ ಅವರ ಮನಸ್ಸು ಸಹಜವಾಗಿಯೇ ಕಾಂಗ್ರೆಸ್ಸನ(ಸೆಕ್ಯುಲರ್ ) ಕಡೆ ಹೋಗಿತ್ತು . ೨೦೦೮ ರ ಎಲೆಕ್ಷನಲ್ಲಿ ಕುಂದಾಪುರದಿಂದ ಟಿಕೆಟ್ ಕೊಟ್ರು ಸಹ, ಶ್ರೀನಿವಾಸ್ ಶೆಟ್ಟಿಯವರ ಜನಪ್ರಿಯತೆ ಮುಂದೆ ಸೋತರು. ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಸದಾನಂದ ಗೌಡರ ವಿರುದ್ದ ನಿಂತರೂ ವಿಜಯ ಲಕ್ಷ್ಮಿ ಒಲಿಯಲಿಲ್ಲ , ಕಾರಣ ಬಿಜೆಪಿ ಯಲ್ಲಿ ಇದ್ದ ಸಂಘಟನ ಶಕ್ತಿ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಚಿತ್ರಣ ಬದಲಾಗಿದೆ. ಬಿಜೆಪಿಯ ಒಳ ಜಗಳ , ಸತತವಾಗಿ ಎರಡು ಬಾರಿ ಸೋತ ಜೆಪಿ ಅವರ ಮೇಲೆ ಜನರಿಗಿದ್ದ ಅನುಕಂಪ,
ಸುನಿಲ್ ಕುಮಾರ್ ಬಗ್ಗೆ ಇದ್ದ ಅಪಪ್ರಚಾರ, ಬಿಜೆಪಿಗೆ ನಿಜಯಾಗಿಯು " ಸ್ಲೋ ಪಾಯ್ಸನ್ " ಆಗಿತ್ತು. ಈ ಕಾರಣಗಳಿಂದಾಗಿ ಕಾಂಗ್ರೆಸ್ ಗೆ ಅನಾಯಾಸ ಗೆಲುವು ಸಿಕ್ಕಿದೆ ಎಂದರೆ ತಪ್ಪಾಗುತ್ತೆ. ಬಿಜೆಪಿ ತಾನಾಗಿಯೇ ಚುಚಿಕೊಂಡ ಸ್ಲೋ ಪಾಯ್ಸನ್ ಇಂಜೆಕ್ಷನ್. ಮನುಷ್ಯ ಎಷ್ಟೇ ಉನ್ನತ ಅಧಿಕಾರಕ್ಕೆ ಹೋದರೂ ತನ್ನನ್ನು ಗೆಲ್ಲಿಸಿದ ಜನಸಾಮಾನ್ಯರನ್ನು ಮರೀಬಾರ್ದು, ಜನಗಳ ನೋವು ನಲಿವುಗಳಿಗೆ ಸ್ಪಂದಿಸಬೇಕು. ಅನ್ನೋದನ್ನ ಸುನಿಲ್ ಕುಮಾರ್ ತಿಳ್ಕೊಂಡಿದ್ರೆ, ಬೇರೆ ಯಾರು ಅಪಪ್ರಚಾರ ಮಾಡೋಕೆ ಅವಕಾಶ ಇರ್ತಿರ್ಲಿಲ್ಲ.
ಇಷ್ಟೆಲ್ಲಾ ಇದ್ರೂ, ಕಾರ್ಕಳ ಕ್ಷೇತ್ರದ ವೋಟ್ ಶೇರಿಂಗ್ ನಲ್ಲಿ ಸುನಿಲ್ ಗೆ ಸುಮಾರು ಒಂದು ಸಾವಿರ ಲೀಡ್ ಕೊಟ್ಟಿದೆ. ಇನ್ನಾದ್ರು ಅವರು ಮೊದಲಿನ ಸುನಿಲ್ ಆಗಲಿ, ಮುಂದಿನ ಎಲೆಕ್ಷೆನ್ ನಲ್ಲಿ ಜನರು ಮತ್ತೊಮ್ಮೆ ಅವರನ್ನು ಗೆಲುವಿನ ಪಟ್ಟಕ್ಕೆ ಏರಿಸಲಿ ಅಂತ ಅವರ ಅಭಿಮಾನಿಯಾಗಿ ಆಶಿಸುತ್ತೇನೆ.
ಸದಾ ಜನರ ಜೊತೆ ಇದ್ರೆ , ಅವರ ಆಶೀರ್ವಾದ ಸಿಕ್ಕೆ ಸಿಗುತ್ತೆ ಅನ್ನೋದನ್ನ ಪ್ರೂವ್ ಮಾಡಿದ ಜೆಪಿ ಹೆಗಡೆ ಅವರಿಗೂ ಒಳ್ಳೆಯದಾಗಲಿ.
ಒಳ್ಳೆತನವನ್ನ ಪಕ್ಷಾತಿತ ವಾಗಿ ಗೆಲ್ಲಿಸಿದ ಮತದಾರರಿಗೆ ಅಭಿನಂದನೆ.



Tuesday, September 27, 2011

ಭೂತಾಯಿಯ ಗರ್ಭ

ನಗ್ನ ದೇಹದಿಂದ, ನಶ್ವರ ದಿಕ್ಕಿನೆಡೆ
ಜೀವನ ಮುಂದುವರೆಸಿದೆ ಅದರ ನಡಿಗೆ
ಎಷ್ಟು ದಿನ ನಡೆಯುತ್ತೆ ಈ ನಾಟಕ
ತಾಯಿ ಗರ್ಭದಿಂದ, ಭೂತಾಯಿಯ ಗರ್ಭ ಸೇರುವ ತನಕ.

ಜೀವನದ ಪ್ರತಿ ಕ್ಷಣ

ಮೂರು ದಿನದ ಜೀವನ
ಸಾವಿನತ್ತ ನಮ್ಮ ಪಯಣ
ಯಾಕೆ ಜಗಳ ರೋಷದಲಿ ಕಾಲಹರಣ
ಸವಿ ನೀ ಜೀವನದ ಪ್ರತಿ ಕ್ಷಣ

Thursday, June 2, 2011

वीर सरदार

हो गयी हैं मुझे मिटटी से प्यार
नहीं चाहिए मुझे यह जीवन , संसार
माँ, मेरे प्यार को करना मत इनकार
मर के भी बनना चाहता हूँ वीर सरदार.

Wednesday, June 1, 2011

ಲೈಫ್ ಇನ್ ಫಸ್ಟ್ ಗೇರು

ದಿನ ಅಂತ ಇದ್ದೆ ಲೈಫ್ ಅಲ್ಲಿ ಬರಿ ಬೋರು
ಟೈಮ್ ಪಾಸಗೆ ಮಾಡ್ತಾ ಇದ್ದೆ ,fb/orkut ಅಲ್ಲಿ ಚಾಟ್ ವಿಥ್ ಫಿಗರು
ನನ್ನ ಕಷ್ಟ ನೋಡಿ ಗೆಳಯ ಕೊಟ್ಟ ಐಡಿಯಾ , ಕುಡಿ ದಿನ ಒಂದು ಬೀರು
ಕಿಂಗ್ ಆಫ್ ಗುಡ್ ಟೈಮ್ ಮಹಿಮೆ ,ನಡಿತ ಇದೆ ಲೈಫ್ ಇನ್ ಫಸ್ಟ್ ಗೇರು(Gear)

Thursday, December 9, 2010

ಬೆಳಕು

ಏತಕೆ ದೂರ ಇರುವೆ ಇನ್ನು ಸಾಕು
ಮನಸಿನ ಸಂಶಯ ಅಹಂಕಾರ ಬಿಸಾಕು
ನಿನ್ನಲ್ದೆ ನೀರಿಲ್ಲದ ಮೀನು ನನ್ನ ಬದುಕು
ಬಾಳ ಪಯಣಕೆ ಆಗು ನೀ ಈಗ ಬೆಳಕು

Tuesday, September 7, 2010

ಮಿಕ

ಚೆಲುವೆ ನೋಡ್ತಾ ಇದ್ರೆ ನಿನ್ನ ಮುಖ
ಪ್ರೀತಿಲಿ ಆಗ್ತ್ಹಿನಿ ನಾನು ಭಾವುಕ
ಯಾಕೆ ನಗುತಿ ನಾನು ಮಾಡ್ತಾ ಇಲ್ಲ ನಾಟಕ
ನಿನ್ನ ಪ್ರೀತಿಗೆ ಆಗಿದ್ದೀನಿ ನಾನು ಮಿಕ

Sunday, September 5, 2010

ದೇವದಾಸನದೆ

ಕಲ್ಲು ಹೃದಯದಲ್ಲಿ ನಿನ್ನ ಹೆಸರ ಕೊರೆದೆ
ನಿನ್ನ ಮುಗುಳು ನಗೆಗೆ ಸೋತು ದುಂಬಿಯಂತೆ ಅಲೆದೆ
ಬಾವನೆಗಳ ಶಬ್ದದಲಿ ಹೇಳಲಾಗದೆ ಮೌನಿಯದೆ
ನೀ ದೂರದ ಮೇಲೆ ನಾ ಕವಿ ದೇವದಾಸನದೆ