ಶತ್ರುಗಳ ಗುಂಡು ಗಡಿಯನ್ನು ದಾಟಿ ಬರುವ ಮುಂಚೆಯೇ ಎದೆ ಕೊಟ್ಟು ತಡೆದು ನಮ್ಮನ್ನು ಕಾಯುತ್ತಿರುವ ಮಾನವ ನಿರ್ಮಿತ ಗೋಡೆ ನಮ್ಮ ಯೋಧ. ಇಷ್ಟು ಸಾಕು ಯೋಧನ ಧೈರ್ಯ , ತ್ಯಾಗ ವರ್ಣಿಸಲು.
MNC ಒಳಗೆ ಟೈಟ್ ಸೆಕ್ಯುರಿಟಿ, ಎ ಸಿ ರೂಂ , ಕೈ ತುಂಬಾ ಸಂಬಳ , ಮನದನ್ನೆ, ಕಾರ್, ವೀಕೆಂಡ್ ಮಸ್ತಿ , ಯಾರಿಗುಂಟು ಯಾರಿಗಿಲ್ಲ ಇಂತ ಜೀವನ. ಏನಂತೀರಿ? ಸ್ವರ್ಗಕ್ಕೆ ಕಿಚ್ಚು ಹಚ್ಹೊದು ಅಂದ್ರೆ ಇದೇನಾ?
ಬಿಡಿ ಇದೆಲ್ಲ ನಮ್ software ಯುವ ಜನಾಂಗಕ್ಕೆ ಎಲ್ಲಿ ಅರ್ಥ ಆಗುತ್ತೆ . virus ಬಂದಾಗ ತನ್ನಿಂತಾನೆ ಹುಡುಕಿ ಸಾಯ್ಸೋ ತರ ಅಂತ ಅಂದುಕೊಂಡಿರ್ತಾರೆನೋ ಗಡಿ ಕಾಯೋ ಕೆಲಸ
ದೇಶಕ್ಕಾಗಿ ಯಾರ್ ಬೇಕಾದ್ರೂ ಸಾಯಲಿ , ಏನು ಬೇಕಾದ್ರೂ ಮಾಡ್ಲಿ, ನಂಗೇನು ಚಿಂತೆ ? ನಮ್ಮ ಕೈಗೆ ಬರ್ತಾ ಇದೆಯಲ್ಲ ನೋಟುಗಳ ಕಂತೆ !!!!!
ಎಷ್ಟು ದಿನ ಈ ಸುಖ, ನೆಮ್ಮದಿ. ಶತ್ರುಗಳು ಗಡಿಯಿಂದ ಒಳಗೆ ನುಸುಳುವವರೆಗೆ ಮಾತ್ರ.ಒಮ್ಮೆ ನುಸುಳಿದರೆ ಏನು ಆಗುತ್ತೆ ಅನ್ನೋದನ್ನ ಹೇಳಬೇಕಾಗಿಲ್ಲ. 9/11ದುರಂತ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತೆ.
ಎಷ್ಟು ದಿನ ಈ ಸುಖ, ನೆಮ್ಮದಿ. ಶತ್ರುಗಳು ಗಡಿಯಿಂದ ಒಳಗೆ ನುಸುಳುವವರೆಗೆ ಮಾತ್ರ.ಒಮ್ಮೆ ನುಸುಳಿದರೆ ಏನು ಆಗುತ್ತೆ ಅನ್ನೋದನ್ನ ಹೇಳಬೇಕಾಗಿಲ್ಲ. 9/11ದುರಂತ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತೆ.
ರಂಗ್ ದೇ ಬಸಂತಿ ಚಿತ್ರದ ಅಮೀರ್ ಖಾನ್ , ಏಕ್ ಥ ಟೈಗರ್ ಚಿತ್ರದ ಸಲ್ಮಾನ್ ಖಾನ್ ರ ಅಭಿನಯದ ಚಾತುರ್ಯವನ್ನು ಮೆಚ್ಚಿದ ಜನ , ಸ್ನೇಹಿತರನ್ನ ಕಾಡಿ ಬೇಡಿ, ನೆಟ್ಟಲ್ಲಿ ಡೌನ್ ಲೋಡ್ ಮಾಡಿ , ರಿಂಗ್ ಟೋನ್ ಹಾಕಿ ಕೇಳಿದ್ದೇ ಕೇಳಿದ್ದು. ಸಿನೆಮ ನೋಡುವಾಗ ಎಂತಹ ದೇಶಪ್ರೇಮ, ಕೈ ನೋವಾಗುವವರೆಗೆ ಚಪ್ಪಾಳೆ ಹೊಡೆದದ್ದೆ ಹೊಡೆದದ್ದು. ಸಿನೆಮ ಮಾಡಿದ ನಿರ್ದೇಶಕರನ್ನು, ನಟರನ್ನು ಹೊಗಳಿ ಅಟ್ಟಕ್ಕೇರಿಸಿ, ತಮ್ಮ ಎರಡು ದಿನದ ದೇಶಪ್ರೇಮವನ್ನು ಎಲ್ಲೆಡೆ ಸಾರುತ್ತಾರೆ.ನಿಜ ಜೀವನದ ನಮ್ಮ ಹೀರೋ ಗಳನ್ನು ಜನ ಮರಿತಾರೆ. ಕಡೆ ಪಕ್ಷ ಸಿನೇಮಾ ಮಾಡಿ ಹಣ, ಕೀರ್ತಿ, ಜನಮಣ್ಣನೆ ಗಳಿಸಿದ ನಟ ಒಂದೇ ಒಂದು ಪ್ರತಿಭಟನೆ ಮಾಡಬಾರದಿತ್ತೆ ?
ಇತ್ತೀಚೆಗೆ ನಡೆದ ದೆಹಲಿಯ ಗ್ಯಾಂಗ್ ರೇಪ್ ಪ್ರಕರಣಕ್ಕೆ ಬಹುತೇಕ ಜನ ಬೀದಿಗಿಳಿದು ಹೋರಾಟ ನಡೆಸಿದರು. ಅಲ್ಲಿ ಒಂದು ಮಹಿಳೆಯ ಮಾನಕ್ಕೆ ಪ್ರಾಣಕ್ಕೆ ಬೆಲೆ ಇತ್ತು. ಇಲ್ಲಿ ಭಾರತಮಾತೆಯ ಮಾನಕ್ಕೆ, ಪ್ರಾಣಕ್ಕೆ ಬೆಲೆ ಇಲ್ಲವೇ ? ನಮಗೂ ಇದಕ್ಕೂ ಏನೂ ಸಂಬಂಧ ಇಲ್ಲ ಅನ್ನೋ ನಿರ್ಲಿಪ್ತ ಭಾವನೆ . ಇದು ಎಷ್ಟು ಸಮಂಜಸ.

ನಮ್ಮ ದೇಶದ ಮಂತ್ರಿಗಳಿಗೆ ಪೋಲಿಸ್ ಪಡೆ ಸರ್ಪಗಾವಲು. ಅದೆಂಥ ಪ್ರೀತಿ ಭಯ ಅವರಿಗೆ ತಮ್ಮ ಜೀವದ ಮೇಲೆ !!! ಪ್ರಾಣದ ಹಂಗು ತೊರೆದು ದೇಶದ ಗಡಿಯನ್ನು ಸರ್ಪಗಾವಲು ಕಾಯುತ್ತಿರುವ ಸೈನಿಕನ ಪ್ರಾಣಕ್ಕೆ ಕೊಡುವ ಬೆಲೆ ಇದೆ ಏನು ? ವೋಟ್ ಬ್ಯಾಂಕಿಗಾಗಿ ಅನಗತ್ಯ, ಅನವಶ್ಯಕ ವಿಚಾರಗಳಿಗೆ ಹಗಲು ರಾತ್ರಿ ಪ್ರತಿಭಟನೆ ಮಾಡುವ ನಿಮ್ಮಹೋರಾಟಕ್ಕೆ, ವೀರ ಯೋಧನ ರುಂಡ ಫುಟ್ಬಾಲಿನಂತೆ ಚೆಂಡಾಡಿದ ಶತ್ರುಗಳ ವಿರುದ್ದ ನಿಮ್ಮ ರಕ್ತ ಕುದಿಯಲ್ಲಿಲ್ಲವೇ ?
ಯೋಧ ಎಂದರೆ ಒಬ್ಬ ವ್ಯಕ್ತಿ ಅಲ್ಲ. ಸಂಬಳಕ್ಕೆ ಬಂದು ಕೆಲಸ ಮಾಡಿ ಹೋಗುವ ಕಾರ್ಮಿಕನು ಅಲ್ಲ. ಅವನ ಹಿಂದೆ ಒಂದು ಸಂಸಾರದ ತ್ಯಾಗ ಇದೆ. ಅವನಿಗೂ ನಮ್ಮ ಹಾಗೆ ಅಮ್ಮ, ಅಪ್ಪ ಹೆಂಡತಿ ಮಕ್ಕಳು , ಬಂಧು, ಬಳಗ ಎಲ್ಲರು ಇದ್ದಾರೆ.
ಯೋಧ ಎಂದರೆ ಒಬ್ಬ ವ್ಯಕ್ತಿ ಅಲ್ಲ. ಸಂಬಳಕ್ಕೆ ಬಂದು ಕೆಲಸ ಮಾಡಿ ಹೋಗುವ ಕಾರ್ಮಿಕನು ಅಲ್ಲ. ಅವನ ಹಿಂದೆ ಒಂದು ಸಂಸಾರದ ತ್ಯಾಗ ಇದೆ. ಅವನಿಗೂ ನಮ್ಮ ಹಾಗೆ ಅಮ್ಮ, ಅಪ್ಪ ಹೆಂಡತಿ ಮಕ್ಕಳು , ಬಂಧು, ಬಳಗ ಎಲ್ಲರು ಇದ್ದಾರೆ.
ಈ ಸಂಧರ್ಭದಲ್ಲಿ ಸುಬಾಶ್ ಚಂದ್ರ ಬೋಸರ ಜೀವನದಲ್ಲಿ ನಡೆದ ಒಂದು ಘಟನೆ ನೆನಪಿಗೆ ಬರುತ್ತೆ
ಒಬ್ಬ ತಾಯಿ ಬೋಸರಲ್ಲಿ ಬಂದು ಕೇಳಿಕೊಳ್ಳುತ್ತಾಳಂತೆ " ಇವನು ನನ್ನ ಮಗ, ದಯವಿಟ್ಟು ಇವನನ್ನು ನಿಮ್ಮ ಸೈನ್ಯದಲ್ಲಿ ಸೇರಿಸಿಕೊಳ್ಳಿ" ಅವನ್ನು ಅಡಿಯಿಂದ ಮುಡಿಯವರೆಗೆ ನೋಡಿದ ಬೋಸರು "ಏನು ತಾಯಿ, ಹುಟ್ಟು ಕುರುಡ ಇವನು, ಇವನಿಂದ ಯುದ್ದ ಮಾಡಲು ಸಾಧ್ಯವೇ ? " ಆಗ ಆ ತಾಯಿ ಹೇಳಿದಳಂತೆ " ನಿಜ ಸ್ವಾಮೀ ಅವನು ಕುರುಡನೆ, ಯುದ್ದ ಮಾಡಲಾರ. ಆದರೆ ಶತ್ರುಗಳ ಒಂದು ಗುಂಡನ್ನು ನಾಶ ಮಾಡಬಲ್ಲ". ನಿರುತ್ತರರಾದರು ಬೋಸರು.
ಸಂಬಳ ಸಾಲುವುದಿಲ್ಲ ಸೌಲಭ್ಯ ಸರಿಯಿಲ್ಲ ಎಂದು ಕಂಪೆನಿಯಿಂದ ಕಂಪೆನಿಗೆ ಹಾರುವ ನಮಗೆ, ದೇಶಪ್ರೇಮ ಯಾಕಿರುತ್ತೆ ಹೇಳಿ? ನಮ್ಮ ಹಾಗೆಯೇ ಅವರು ಯೋಚನೆ ಮಾಡಿದರೆ ದೇಶದ ಗತಿ ಏನು? ಅವರು ಮನುಷ್ಯರಲ್ಲವೇ ? ಆಸೆ ಆಕಾಂಕ್ಷೆಗಳು ಅವರಿಗೂ ಇಲ್ಲವೇ ? ನಮ್ಮಂಥ ನಾಮರ್ದ್ ಗಳನ್ನು ಕಾಯಲು ತಮ್ಮ ಪ್ರಾಣವನ್ನು ಒತ್ತೆ ಇಡುವ ಬದಲು ಹಾಯಾಗಿ ನಮ್ಮ ಹಾಗೆ ಬದುಕಲಿ ತಪ್ಪೇನು?
ಡಾಲರ್ ಆಸೆಗೆ ಹಗಲು ರಾತ್ರಿ ತಲೆಕೆಡಿಸಿಕೊಂಡು ಕುಳಿತ ಯುವ ಜನರೇ ದೇಶಕ್ಕಾಗಿ ತಲೆ ಕೊಟ್ಟ ಅಣ್ಣ, ತಮ್ಮಂದಿರ ತ್ಯಾಗಕ್ಕೆ ಕೆಲ ನಿಮಿಷದ ಸಂತಾಪ ಸೂಚಿಸಿದರೆ ನಾವು ಕಳೆದುಕೊಳ್ಳುವುದಾದರು ಏನು?
"ಏ ಮೇರೆ ವತನ್ ಕೆ ಲೋಗೊ ಝರ ಆಂಖ್ ಮೇ ಭರ್ ಲೋ ಪಾನಿ ಜೋ ಶಹಿದ್ ಹುಯೆ ಹೇ ಉನ್ ಕಿ ಝರ ಯಾದ್ ಕರೋ ಖುರ್ಬಾನಿ"
------------------------------------ಜೈ ಹಿಂದ್ --------------------------------------------------------------